ಕನಕಪೂರ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಗ್ರಾಮ ಮತ್ತು ಗ್ರಾಮಂಚಾಯತಿ ಕೇಂದ್ರ ಗ್ರಾಮವಾಗಿದ್ದು, ಈ ಗ್ರಾಮವನ್ನು ಹಿಂದೆ ಕರಕಮುಕಲಿ ಎಂದು ಕರೆಯಲಾಗುತ್ತಿತ್ತು , ಇದು ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿದೆ. == ಇತಿಹಾಸ == ಈ ಗ್ರಾಮವು ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿದ್ದು ಭಾರತ ಸ್ವಾತಂತ್ರ ಪಡೆಯುವದಕ್ಕೆ ಮೊದಲು ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. == ಜನಸಂಖ್ಯಾಶಾಸ್ತ್ರ == 2011 ರ ಭಾರತ ಜನಗಣತಿಯಂತೆ ಕರಕಮುಕಲಿ 2185 ಜನಸಂಖ್ಯೆಯನ್ನು ಹೊಂದಿದೆ.1072 ಪುರುಷರು ಮತ್ತು 1113 ಮಹಿಳೆಯರು ವಾಸವಾಗಿದ್ದಾರೆ. == ನಾಗರಿಕ ಆಡಳಿತ == ಭಾರತದ ಪಂಚಾಯತಿ ರಾಜ್ ಕಾಯಿದೆಯ ಸಂವಿಧಾನದ ಪ್ರಕಾರ, ಕನಕಪೂರ ಗ್ರಾಮವನ್ನು ಗ್ರಾಮದ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಸರ್ಪಂಚ್ (ಗ್ರಾಮದ ಮುಖ್ಯಸ್ಥ) ಆಡಳಿತದಲ್ಲಿದೆ. ಐದು ವರ್ಷಕೊಮ್ಮೆ ಗ್ರಾಮಪಂಚಾಯಿತಿ ಚುನಾವಣೆ ನಡೆಯುತ್ತದೆ. == ಶಿಕ್ಷಣ ಸಂಸ್ಥೆಗಳು == ಕನಕಪುರದಲ್ಲಿರುವ ಶಾಲೆಗಳು ಸರ್ಕಾರಿ ಪ್ರಾಥಮಿಕ ಶಾಲೆ ಕನಕಪುರ ಸರ್ಕಾರಿ ಪ್ರೌಢಶಾಲಾ ಕನಕಪುರ . ಪ್ರೌಢಶಾಲಾ ಶಿಕ್ಷಣದ ನಂತರ ಮುಂದಿನ ಅಭ್ಯಾಸಕ್ಕಾಗಿ (ಪಿಯುಸಿ, ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಸೈನ್ಸ್, ಬ್ಯಾಚುಲರ್ ಆಫ್ ಕಾಮರ್ಸ್, ಐಟಿಐ ಮತ್ತು ಬಿಎಡ್) ವಿದ್ಯಾರ್ಥಿಗಳು ಕನಕಪುರದಿಂದ 13 ಕಿಮೀ ದೂರದಲ್ಲಿರುವ ಚಿಂಚೋಳಿ ಪಟ್ಟಣಕ್ಕೆ ಪ್ರಯಾಣಿಸಬೇಕಾಗುತ್ತದೆ. ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಚಿಂಚೋಳಿ ನ ಶ್ರೀಮತಿ. ಸಿ.ಬಿ.ಪಾಟೀಲ್ ಆರ್ಟ್ಸ್ & ಕಾಮರ್ಸ್ ಡಿಗ್ರೀ ಕಾಲೇಜ್, ಚಿಂಚೋಳಿ ಸಿದ್ದಾರ್ಥ ಶಿಕ್ಷಣ ಕಾಲೇಜು ಚಿಂಚೋಳಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಸುಲೇಪೆಟ್ . ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಂಚೋಳಿ ತಾಂತ್ರಿಕ ಶಿಕ್ಷಣ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು 40 ರಿಂದ 80 ಕಿ.ಮೀ ದೂರದಲ್ಲಿ, ಹುಮನಾಬಾದ್ , ಕಾಳಗಿ , ಗುಲ್ಬರ್ಗಾ, ಬೀದರ್ ನಗರಗಳಿಗೆ ಹೋಗಬೇಕಾಗುತ್ತದೆ. == ವಿಶ್ವವಿದ್ಯಾಲಯಗಳು == ಹತ್ತಿರದ ವಿಶ್ವವಿದ್ಯಾನಿಲಯಗಳು ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ == ಕೃಷಿ == ಕನಕಪುರ ಕೃಷಿ ಪ್ರಧಾನ ಗ್ರಾಮವಾಗಿದ್ದು ತೊಗರಿ, ಕಡಲೆ,ಜೋಳ,ಕುಸಬಿ,ಎಳ್ಳು,ಸೂರ್ಯಕಾಂತಿ ಬೆಳೆಯಲಾಗುತ್ತದೆ. ಇಲ್ಲಿನ ಭೂಮಿ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ್ದು ,ಪ್ರಧಾನವಾಗಿ ಮಳೆ ಆಧಾರಿತ ಬೆಳೆ ಬೆಳೆಯಲಾಗುತ್ತದೆ. == ಸಾರಿಗೆ == ಕೆಎಸ್ಆರ್ಟಿಸಿ ಸಂಸ್ಥೆ ಕರ್ನಾಟಕ ರಾಜ್ಯ ಮತ್ತು ಪಕ್ಕದ ರಾಜ್ಯಗಳಿಗೆ ಪ್ರಯಾಣಿಸಲು ಬಸ್ ಸೇವೆ ಒದಗಿಸುತ್ತದೆ . ಹತ್ತಿರದ ರೈಲು ನಿಲ್ದಾಣವು 43 ಕಿಮೀ ದೂರದಲ್ಲಿರುವ ತಾಂಡೂರ್ ( ಸ್ಟೇಷನ್ ಕೋಡ್ ) ಮತ್ತು ಸೇಡಂ ( ) ಪಟ್ಟಣದಲ್ಲಿದೆ . ಹತ್ತಿರದ ವಿಮಾನ ನಿಲ್ದಾಣ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದಲ್ಲಿರುವ (155 ಕಿ.ಮೀ) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. == ಬಾಹ್ಯ ಕೊಂಡಿಗಳು == ಕನಕಪೂರ, ಚಿಂಚೋಳಿ ನಕ್ಷೆ == ಉಲ್ಲೇಖಗಳು ==